ವಿಪ್ರೊ ಟೆಕ್ನಾಲಜೀಸ್ ೧೯೮೦ ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇದು ೧೯೪೫ ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು ೭೯,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. ೫೦೦ ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು. ವಿಪ್ರೊ ಟೆಕ್ನಾಲಜೀಸ್ ನ ಪ್ರಸಕ್ತ ನಿರ್ದೇಶಕರು ಅಜಿಮ್ ಪ್ರೇಮ್‍ಜಿ. == ಹೊರಗಿನ ವಿಪ್ರೊ ವಿಪ್ರೊ ಟೆಕ್ನಾಲಜೀಸ್ == 2008-06-22 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==